Monday, August 12, 2013

ಪ್ರೀತಿ ಮಾಡೋದು ತಪ್ಪೇ 

ಪ್ರೀತಿ ಮಾಡಬಾರದು ಮಾಡಿದರೆ ಜಗಕೆ ಹೆದರಬಾರದು………….. ಚಿತ್ರಗೀತೆ ಕಿವಿಯಲ್ಲಿ ಗುನುಗುಡುತ್ತಿದ್ದಂತೆ ಮನಸ್ಸಲ್ಲೇನೇನೋ ಪ್ರಶ್ನೆಗಳು ಮೂಡಲಾರಂಭಿಸಿದವು………. ಸಹಜವೇನೋ ಎಂಬಂತೆ, ತರಗತಿಯಲ್ಲಿ ನಮ್ಮ ಸಮಾಜಶಾಸ್ತ್ರ ಉಪನ್ಯಾಸಕರೊಬ್ಬರು ಹೇಳುತ್ತಿದ್ದ ಮಾತೂ ನೆನಪಿಗೆ ಬಂತು, ಅದೇನು ಅನ್ನುವ ಕುತೂಹಲ ಖಂಡಿತ ಇದ್ದೇ ಇರುತ್ತದೆ ಬಿಡಿ. ಆದರೆ ಅದನ್ನು ತಿಳಿದುಕೊಳ್ಳುವುದಕ್ಕೆ ಮೊದಲು ಸ್ವಲ್ಪ ಗಂಭೀರ ಎನಿಸಿಕೊಳ್ಳಬಹುದಾದ ವಿಚಾರವೂ ಇದೆ….ಹದಿಹರಯ ಮನುಷ್ಯನನ್ನು ಯಾವ ಕಡೆಗೂ ಒಯ್ಯಬಹುದಲ್ಲವೆ? ಹೌದು ಎಂದು ಮನಸ್ಸಿಲ್ಲದೆಯೂ ಒಪ್ಪಿಕೊಳ್ಳಲೇಬೇಕು…. ಯಾಕಪ್ಪಾ ಇದೆಲ್ಲ ಪೀಠಿಕೆ ಅಂತ ನೀವಂದುಕೊಂಡರೂ ಪರವಾಗಿಲ್ಲ….. ನಾನು ಹೇಳಬೇಕಾದದ್ದನ್ನಂತೂ ಹೇಳಲೇಬೇಕು….
ಇತ್ತೀಚೆಗೆ ಒಮ್ಮೆ ತರಗತಿಯಲ್ಲಿ ನನ್ನ ಅದ್ಯಾಪಕರಂತೆ ನಾನೂ  ಪಾಠ ಮಾಡುತ್ತಿದ್ದಾಗ ಹೇಳಿದೆ, ನೋಡಿ ಮಕ್ಕಳೇ ಜೀವನ ಅನ್ನೋದು ನಾವಂದುಕೊಂಡ ಹಾಗೆ ಇರೋದಿಲ್ಲ… ಅಲ್ಲದೆಷ್ಟೋ ಕಷ್ಟಗಳು ನೋವುಗಳು ಬರುತ್ತವೆ……. ಎಲ್ಲವನ್ನೂ ಸರಿದೂಗಿಸಿಕೊಂಡು ನಾವು ಬದುಕಬೇಕಾಗಿದೆ…. ಸುಖವೇ ಬದುಕು ಅಂತ ನೀವಂದುಕೊಂಡಿದ್ದರೆ ಅದು ಸಿನಿಮಾದಲ್ಲಿ ಮಾತ್ರ.. ಅದೇ ರೀತಿ ಸಿನಿಮಾ ಯಾವತ್ತಿದ್ದರೂ ವಾಸ್ತವಕ್ಕೆ ದೂರದ ವಿಷಯ…. ಹೀಗೆ ಏನೇನೋ ವಿಚಾರಗಳು …….. ಮಾತು ಮುಂದುವರೆದು ಪ್ರೀತಿ ಪ್ರೇಮ ಅಂತ ನಿಮ್ಮ ಜೀವನವನ್ನು ಹಾಳು ಮಾಡಿಕೊಂಡು ಕೊನೆಗೆ ಪೇಚಿಗೆ ಸಿಲುಕಿಕೊಳ್ಳಬೇಡಿ ಅನ್ನುತ್ತಿದ್ದಂತೆ ಒಬ್ಬ ಹುಡುಗ ಎದ್ದು ನಿಂತು ಮೇಡಂ ಹಾಗದ್ರೆ ಪ್ರೀತಿ ಮಾಡೋದೇ ತಪ್ಪಾ? ಅಂದ……. ಏನೆಂದು ನಾ ಹೇಳಲಿ ಮಾನವನಾಸೆಗೆ ಕೊನೆಯೆಲ್ಲಿ……….. ಹಾಡು ನೆನಪಾಗಿ ಒಂದು ಕ್ಷಣ ಯೋಚಿಸಿದೆ ಈಗ ಏನೆಂದು ನಾ ಹೇಳಲಿ……….
ಹೌದಲ್ವಾ!!!!!! ಪ್ರೀತಿ ಮಾಡೋದು ತಪ್ಪೇ? ಖಂಡಿತ ಅಲ್ಲ….. ಆದ್ರೆ ಎಲ್ಲಿ? ಯಾವಾಗ? ಹೇಗೆ? ಯಾವುದು ನಿಜವಾದ ಪ್ರೀತಿ? ಯಾವುದು ಆಕರ್ಷಣೆ? ಎಲ್ಲವೂ ಯೋಚಿಸಲೇ ಬೇಕಲ್ಲವೆ? ತಬ್ಬಿಕೊಂಡು ಮುತ್ತಿಟ್ಟ ಮಾತ್ರಕ್ಕೆ ಅದೇ ಪ್ರೀತಿ ಅಂದುಕೊಳ್ಳುವ ವಯಸ್ಸಿಗೆ ನಾವೇನಂದರೂ ತೆಗೆದುಕೊಳ್ಳುವ ಮನಸ್ಸಾದರೂ ಎಲ್ಲಿಂದ ಬಂದೀತು ಅಲ್ಲವೆ? ಹಾಗಂತೆ ಗೊತ್ತಿದ್ದೂ ಗೊತ್ತಿದ್ದೂ ಎಳೆಯ ಮನಸ್ಸುಗಳು ದಾರಿತಪ್ಪಿದರೆ ನೋಡಿ ಸುಮ್ಮನೆ ಸಂತೋಷ ಪಡುವಷ್ಟು ವಿಕೃತ ಮನಸ್ಸು ನನ್ನದಲ್ಲದ್ದರಿಂದಲೋ ಏನೋ ನಾನು ನೀನೀ ವಯಸ್ಸಿಗೆ ಪ್ರೀತಿಯ ಕಲ್ಪನೆ ಮಾಡಿಕೊಂಡರೂ ಅದು ತಪ್ಪೇ……. ಎಂಬುದಾಗಿ ಮುಖಕ್ಕೆ ಹೊಡೆದ ಹಾಗೆ ಹೇಳಿದ್ದೆನಾದರೂ ನನ್ನ ಮನಸ್ಸು ಒಳಗೊಳಗೇ ನನ್ನನ್ನು ಮತ್ತೊಮ್ಮೆ ಪ್ರಶ್ನಿಸಿತು ಪ್ರೀತಿ ಮಾಡೋದು ತಪ್ಪೇ ಹೌದು ಎಂದಾದರೂ ತಪ್ಪು ಮಾಡದವ್ರು ಯಾರವ್ರೇ……… ತಪ್ಪೇ ಮಾಡದವ್ರು ಎಲ್ಲವ್ರೇ……… ಅಲ್ಲವೆ? ಆದರೆ ಅದರ ಜೊತೆಗೆ ನೆನಪಿಗೆ ಬಂದದ್ದು ಪ್ರೀತಿ ನೀನಿಲ್ಲದೆ ನಾ ಹೇಗಿರಲಿ…….. ಅನ್ನುವ ಹಾಡು….. ಎಲ್ಲಿ ಜಾರಿತೋ ಮನವು………… ಎಲ್ಲೆ ಮೀರಿತೋ ಕವಿ ಹಾಡಿದ್ದು ಇದನ್ನೇ ಅಲ್ಲವೇ………



5 comments:

  1. ಕೆಲವು ಬರಹ ಮಂಗಳೂರಿನ ಹಂಪನಕಟ್ಟೆಯ ಹೋಟೆಲಿನಲ್ಲಿ ಬಾಳೆಹಣ್ಣಿನ ಪೋಡಿ ತಿಂದಂತೆ (ಸುಲಿದ ಬಾಳೆಯ ಹಣ್ಣಿನಂದದಿ ಸುಲಭವಾಗಿರ್ಪ...- ಕವಿ ಮಹಾಲಿಂಗರಂಗನ ಕ್ಷಮೆ ಕೋರಿ). ಇನ್ನೂ ಕೆಲವು ಅತ್ತ ಪಲಾವ್ ಕೂಡಾ ಅಲ್ಲ ಇತ್ತ ಚಿತ್ರಾನ್ನವೂ ಅಲ್ಲ. ಮನಸ್ಸಿನಲ್ಲಿರುವುದೆಲ್ಲಾ ಹೊರಬಂದು ಹರಡಿದೆ. ಕಡಲಿನ ಅಲೆಗಳು ಉಳ್ಳಾಲದಲ್ಲಿ ಬಂಡೆಗೆ ಬಡಿದಂತೆ... ಚೆನ್ನಾಗಿದೆ.
    ಮುಂದಿನ ಬರಹ ಬಿಸಿ ಗೋಳಿಬಜೆಯಾಗಿರಲಿ.
    ಪ್ರೀತಿಯಿಂದ
    -ಶರತ್

    ReplyDelete
  2. ಪ್ರೀತಿ ಮಾಡಬಾರದು ಮಾಡಿದರೆ ಜಗಕೆ ಹೆದರಬಾರದು………

    ಹೌದು, ಆ ರವಿಚಂದ್ರನ್‌ ಹಾಗೆ ಹೇಳಿದ ಅಂತ ನಾವು ಕೇಳಿಯೇ ಲೆಕ್ಕತಪ್ಪಿ ಎಸ್ಸೆಸ್ಸೆಲ್ಸಿಯಲ್ಲಿ ಮೂರು ಬಾರಿ ಲೆಕ್ಕ ಪರೀಕ್ಷೆ ಬರೆಯಬೇಕಾಯಿತು. ನಾವು ಅಂದು ಲೈನ್‌ ಹೊಡೆಯುತ್ತಿದ್ದ ಹುಡುಗಿಯರೆಲ್ಲಾ ಈಗ ಆಂಟಿಯರು. ಕೈಯಲ್ಲೆರಡು ತುಂಟ ಚಿನಕುರುಳಿಗಳು. ಅಂದಿನ ಡ್ರೀಮ್‌ ಗರ್ಲ್‌ಗಳೆಲ್ಲಾ ಡ್ರಮ್‌ ಗರ್ಲ್‌ಗಳಂತೆ ಕಾಣುವಾಗ ನಾನು ಲೈನ್‌ ಹೊಡೆದದ್ದು ಇವಳಿಗೇನಾ ಅಂತ ಅನ್ಸುತ್ತೆ. ನೋಡಿ ಅಲ್ಲಿಗೇ ಕಿಸಕ್ಕನೆ ನಗುಬಂದರೂ ನುಂಗುತ್ತೇನೆ.
    ಬದುಕಿನ ರಸ್ತೆಯಲ್ಲಿ ಆಯಾ ಹಂತ ತಿರುವುಗಳಲ್ಲಿ ನಿಮ್ಮ ಹಾಗೇ ಬೋರ್ಡ್‌ ಹಾಕುವವರು ಬೇಕು. ‘ ನಿಧಾನ ಚಲಿಸಿ; ಅಪಘಾತ ವಲಯ’ ಮುಂದೆ ತಿರುವು ಇದೆ., ವೇಗಮಿತಿ– 20 ಕಿ.ಮೀ....’ ಹೀಗೆ. ಇವೆಲ್ಲವನ್ನೂ ಮೀರಿ ಓಡುವವರಿಗೆ ಕಾಲವೇ ಬುದ್ದಿ ಹೇಳುತ್ತದೆ. ಇಲ್ಲ ಅವರ ಗಾಲಿಯೇ ಟುಸ್ಸೆನ್ನುತ್ತದೆ. ಅವರವರ ದಾರಿ ಅವರಿಗೇ ಬಿಡಿ. ನಿಮ್ಮ (ಬೋರ್ಡ್‌ ಹಾಕುವ) ಕೆಲಸ ಮಾಡಿ ಎಚ್ಚರಿಸಿದ್ದೀರಿ. ಮುಂದಿನ ದಾರಿ ಸಾಗುವವರಿಗೆ ಬಿಟ್ಟದ್ದು.
    ಒಳ್ಳೆಯ ಬರಹ
    ಪ್ರೀತಿಯಿಂದ
    –ಶರತ್‌

    ReplyDelete
  3. ಪ್ರತಿಯೊಬ್ಬ ವ್ಯಕ್ತಿಯು ತನ್ನನು ಬೇರೆಯವರು ನೋಡಲಿ ಎಂದು ಕನ್ನಡಿ ನೋಡುವುದು ಸಹಜ.ನಾವು ಕನ್ನಡಿ ಎದುರು ನಿಲ್ಲುವುದೇ ನಮ್ಮನು ನಾವು ನೋಡೋ ಬದಲು ಬೇರೆಯವರು ನಮ್ಮನು ನೋಡಲಿ ಎಂದು.ಪ್ರೀತಿ ಅಂದರೇನು?ಸಣ್ಣ ವಿವರಣೆ ನೀಡಬಲ್ಲೆ.

    ಬಾಲ್ಯದ ಪ್ರೀತಿ:ನಗುವಿನಿಂದ ಶುರುವಾಗಿ ಚಾಕಲೇಟು,ಪೆನ್ನು,ಒಟ್ಟಿಗೆ ಕೂತು ಕಲಿಯುವುದು,ಕೊನೆಗೆ ಮನಸಿಗೆ ಹಿಡಿಸಿದ್ರೇ ಅವರ ನೋಟ್ಸ್ ಬಿಟ್ಟು ಬೇರೆಯಾರದ್ದು ತೆಗೆದುಕೊಳ್ಳೋದಿಲ್ಲ.

    ಕಾಲೇಜು ಪ್ರೀತಿ: ಇಲ್ಲಿ ಗಮನಿಸ ಬೇಕಾದ ವಿಷಯಗಳು ನೂರಾರು. ಟೈಮ್ ಪಾಸ್ ಪ್ರೀತಿ ಅಂತಲೂ ಕರಿಯಬಹುದು. ಈ ವಯಸಿನಲ್ಲಿ ಹುಡುಗರು ತನಗೆ ಯಾರಾದರೂ ಒಬ್ಬರು ಬಾಳ ಸಂಗಾತಿ ಸಿಕ್ಕರೆ ನಾವು ಮುಂದಿನ ಜೀವನದಲ್ಲಿ ಸುಖವಾಗಿರುತ್ತೇವೆ ಅನ್ನುವ ಆಶಾ ಗೋಪುರವನ್ನು ಕಟ್ಟಿಕೊಂಡವರು ಕೂಡ ಇದ್ದಾರೆ.

    ಟೈಮ್ ಪಾಸ್ ಪ್ರೀತಿ ಅಂದರೇ:- ಯಾವದಾದ್ರು ಹುಡುಗಿ ನನ್ನ ಜೊತೆ ಹರಟೆ ಹೊಡಿಯೋಕೆ ಸಿಕ್ರೆ ಸಾಕು ಅಂತ, ಇದ್ದಬದ್ದ ಹೇರ್ ಜಲ್,ಕ್ರೀಮ್ ಮುಖಕ್ಕೆ ಬಳಿದುಕೊಂಡು, ಮೈಗೆ ಫಿಟ್ ಆಗಿ ಡ್ರೆಸ್, ಕೋಳಿ ಕಾಲಿನ ಪ್ಯಾಂಟ್, ಮುಳ್ಳು ಹಂದಿ ಹೇರ್ ಸ್ಟೈಲ್ ಮೇಕೆ ಗಡ್ಡ, ಸುತ್ತೋಕೆ ಒಂದು ಬೈಕ್ ,ವಾರಕ್ಕೊಂದು ಸಿನಿಮಾ, ತಾವು ಮಾಡಿಕೊಂಡ ಪಾರ್ಟಿ ಸೆಲ್ಫಿ ಗಳು. ಒಟ್ಟಿನಲ್ಲಿ ಹೊರಜಗತ್ತಿಗೆ ಸುಂದರವಾಗಿ ಕಾಣಿಸಿಕೊಳ್ಳುತ್ತಾರೆ .ಏನೂ ಚಿಂತೆಯೇ ಇಲ್ಲದ ಹಾಗೆ .
    ಅವರ ಮನಸು-ಗುಣ ಎಷ್ಟು ಸುಂದರವಾಗಿದೆ ಅಂತ ನೋಡೋರಿಗೆ ಗೊತ್ತು.
    ಹಹ:.....
    ಅಪ್ಪ ಅಮ್ಮ ಪಡೋ ಕಷ್ಟ ಗೊತ್ತಿದ್ರೆ ತಾನೇ..!
    ದಿನಾಲೂ ಪಾರ್ಟಿ ಮೋಜು ಮಸ್ತಿ ಅಂತ ತಿರುಗಾಡೋ, ಇವರಿಗೇನು ಗೊತ್ತು ತನ್ನ ತಂದೆ ಯಾರ ಯಾರದೋ ಕಾಲಬುಡದಲ್ಲಿ ,ಸುಡುಬಿಸಿಲಲ್ಲಿ, ಬೆಂಕಿ ಬಳಿ ದುಡಿದು ತಂಡ ಹಣದ ಕಷ್ಟ.
    ಅಹಂಕಾರಿಗಳು......

    ಹುಡುಗರಲ್ಲಿ ಎರಡು ರೀತಿಯ ವ್ಯಕ್ತಿತ್ವ ಇದೆ ಒಂದು ಹೇರ್ ಸ್ಟೈಲ್, ಪೆನ್ಸಿಲ್ ಪ್ಯಾಂಟ್, ಪಾರ್ಟಿ- ಮೋಜು- ಮಸ್ತಿ ಅಂತ ತಮ್ಮ ದೇಹವನ್ನು ಸುಂದರವಾಗಿಟ್ಟು ಕೊಳ್ಳುವವರು.

    ಇನ್ನೊಂದು ಭವಿಷ್ಯದ ಬಗ್ಗೆ ಕಾಳಜಿ ಅತ್ಯಂತ ಹೆಚ್ಚು ಪ್ರೀತಿ ತೋರುತ್ತಾ ತಮ್ಮ ಜೀವನವನ್ನು ಸುಂದರವಾಗಿಟ್ಟುಕೊಳ್ಳೋರು .

    -Durga Bhat Havyak

    ReplyDelete