Thursday, October 27, 2011

ಬದುಕೇ ಏಕೆ ಕಾಡುವೆ ಹೀಗೆ

ಬದುಕೇ ಏಕೆ ಕಾಡುವೆ ಹೀಗೆ.........................................................................?ಹೌದಲ್ವಾ! ನಿಮಗೂ ಹೀಗೆ ಎಂದಾದರೂ ಅನಿಸಿದ್ದುಂಟಾ? ಪ್ರತಿ ಕ್ಷಣ, ಪ್ರತಿ ಗಂಟೆ, ವಾರ, ತಿಂಗಳು, ವರ್ಷ, ಹೀಗೇ ಎಷ್ಟೇ ಆಲೋಚಿಸಿದರೂ ಉತ್ತರವೇ ಸಿಗದ ಪ್ರಶ್ನೆ ಇದು ಅಂತ ನನ್ನ ಹಾಗೆ ಕೆಲವೋಮ್ಮೆಯಾದರೂ ನೀವೂ ತಲೆಕೆರೆದುಕೊಂಡಿರಬಹುದಲ್ವಾ!ಹುಂ!? ಅದು ಒಂದು ದಿನ ಎಸ್ಸೆಸ್ಸೆಲ್ಸಿ ಮುಗಿಯುವ ದಿನ ಅಥವಾ ಪಿಯುಸಿ ಮುಗಿಸಿ ಹೊರ ಹೋಗುವ ದಿನ, ಇನ್ನೂ ಹೇಳುವುದಾದರೆ ಡಿಗ್ರಿ ಮುಗಿಸಿ ಹೊರಬರುವಾಗ ಅಂತಾನಾದ್ರೂ ಇಟ್ಕೊಳ್ಳೋಣ. ಆಟೋಗ್ರಾಫ಼್ ನಲ್ಲಿ ಬಯಸಿದ ಬಯಕೆಗಳು ಬಳಿ ಬಂದು ಬಾಳು ಬಂಗಾರವಾಗಲಿ ಅಂತ ಪರಸ್ಪರ ಹಾರೈಸಿಕೊಂಡದ್ದು....... ಬಿಟ್ಟು ಬೇರಾಗ್ತೇವಲ್ಲಾ ಅಂತ ಅಪ್ಪಿಕೊಂಡು ಅತ್ತದ್ದು.... ಪ್ಲೀಸ್ ಸೆಂಡ್ ಮಿ ಯುವರ್ ವೆಡ್ಡಿಂಗ್ ಕಾರ್ಡು ಅಂತ ಕೇಳಿ ಕೊಂಡು ಸಂಭ್ರಮಿಸಿದ್ದು........ ಅದಕ್ಕೂ ಹಿಂದೆ ಅಕ್ಕ ತಂಗಿ ಅಣ್ಣ ತಮ್ಮ ಗೆಳೆಯ ಗೆಳತಿಯರ ಜೊತೆ ಆಡಿದ ಅಡುಗೆ ಆಟ, ಮದುವೆ ಆಟ, ಲಗೋರಿ ಆಟ, ಚೆನ್ನೆ ಮಣೆ ಆಟ, ಗೊತ್ತೇ ಇಲ್ಲದ ಆಂಗ್ಲ ಮಾಧ್ಯಮದ ಮಕ್ಕಳ ಆಟ ಅಥವ ಪೇಟೆ ಮಕ್ಕಳ ಆಟ ಎಂದೇ ಆ ಕಾಲದಲ್ಲಿ ಕರೆಸಿಕೊಂಡಿದ್ದ ಚೆಸ್ ಆಟ............... ಇನ್ನೂ ಏನೇನೋ ಆಟಗಳು...... ಬಾಲ್ಯದ ದಿನಗಳದೆಷ್ಟು ಮಧುರವಾದವು...... ಈಗ ಹಳೆಯ ನೆನಪುಗಳಷ್ಟೇ....!? ಆಗ ಅನಿಸಿದ್ದು ಬೇಗ ದೊಡ್ಡವರಾಗಿ ಬಿಟ್ಟರೆ ಓದುವ ಕಷ್ಟ ಇಲ್ಲ, ನಮಗೆ ಬೇಕಾದ ಹಾಗೆ ಖುಷಿಯಲ್ಲಿ ಇರಬಹುದಲ್ಲ ಅಂತ.... ದೂರದ ಬೆಟ್ಟ ನುಣ್ಣಗೆ ಅಂತ ಹಿರಿಯರು ಹೇಳಿದ್ದು ಇದನ್ನೇ ಅಂತ ಅರ್ಥ ಆಗೋದು ಮಾತ್ರ ತಡವಾಗಿ ಅಷ್ಟೇ.....ಓದು ಪರೀಕ್ಷೆ ಹತ್ತಿರ ಬರ್ತಿದೆ ಅನ್ನುವ ಅಮ್ಮನ ಎಚ್ಚರಿಕೆಯ ನುಡಿ ಕಿವಿಗೆ ಕರ್ಕಶವಾಗಿಯೇ ಕೇಳಿದ್ದು........ ಅಪ್ಪನ ಹೆದರಿಕೆಗೆ ಪಠ್ಯ ಪುಸ್ತಕದ ಎಡೆಯಲ್ಲಿಟ್ಟು ಓದುತ್ತಿದ್ದುದು ಆ ವಯಸ್ಸಿಗೆ ಇಷ್ಟವಾಗುತ್ತಿದ್ದ ಸಾಯಿಸುತೆಯ ಅದೆಷ್ಟೋ ಕಾದಂಬರಿಗಳನ್ನು..... ಪರೀಕ್ಷೆಯ ಮೊದಲಿನ ದಿನದವರೆಗೂ ಓದು ಅಂದ ಕೂಡಲೇ ಓದಿದ್ದು ಓದುತ್ತಿದ್ದದ್ದು ಕಾದಂಬರಿ ಪುಸ್ತಕಗಳನ್ನಷ್ಟೇ.. ಹೊರತು ಪಾಠ ಪುಸ್ತಕಗಳನ್ನಲ್ಲ..... ಅಮ್ಮ ಮನೆಕೆಲಸ ಕಲಿ ಎಂದಾಗ ಬೇಕಾದಾಗ ಮಾಡಿದರಾಯ್ತು ಬಿಡು....ಎಂದು ಚೀರಿ ಜಾಗದಿಂದ ಕಾಲ್ಕಿತ್ತದ್ದು... ಎಲ್ಲವೂ ಸದಾ ಕಾಡುವ ನೆನಪುಗಳು........!ವಾಸ್ತವದಲ್ಲಿ ಗಳಿಸುವ ಸ್ವಾತಂತ್ರ್ಯ ನಮ್ಮದು....... ವ್ಯಯಿಸುವುದಕ್ಕೆ ಹಲವರ ಅಪ್ಪಣೆ ಬೇಕು...... ನನ್ನ ಜವಾಬ್ದಾರಿಗಳೇನು ಅನ್ನುವುದಕ್ಕಿಂತ ನಿನ್ನ ಜವಾಬ್ದಾರಿಗಳ ಪಟ್ಟಿ ಹನುಮಂತನ ಬಾಲ........... ನಾನೇನು ಅನ್ನುವುದಕ್ಕಿಂತ ನಿನ್ನನ್ನೆಚ್ಚರಿಸುವುದಕ್ಕೇ ಇರುವವರ ಸಾಲು..... ಎಲ್ಲಾ ಸಂದರ್ಭಗಳಲ್ಲೂ ನೆನಪಾಗುವುದು.... ತಾಳುವಿಕೆಗಿಂತನ್ಯ ತಪವು ಇಲ್ಲ............ ದಾಸ ವಾಣಿ ಅದೆಷ್ಟು ಅರ್ಥಪೂರ್ಣ........... ಆದರೆ ಅದ್ಯಾರಿಗೆ ಅನ್ವಯ ಅನ್ನುವುದು ಚಿಂತಿಸಲೇಬೇಕಾದ ಸಂಗತಿ........
ಬದುಕು ನಾವಂದುಕೊಂಡಂತಿರುವುದಿಲ್ಲ.. ವಾಸ್ತವಕ್ಕೆ ಬಂದು ಹಿಂದಿನ ದಿನಗಳನ್ನು ನೆನಪಿಸಿಕೊಂಡಾಗ ಆ ದಿನಗಲೇ ಒಳ್ಳೆಯದಿತ್ತು ಅನ್ನಿಸದಿರದು....... ಬಯಸಿದ್ದು ಸಿಗುವುದೂ ದೂರದ ಮಾತು........ ಆಸೆಗಳ ಲೋಕದಲಿ ಕಥೆಗಳ ಬರೆವಂಥ.......... ಅನ್ನುವ ಚಿತ್ರ ಗೀತೆ ಪದೇ ಪದೆ ನೆನಪಾಗುತ್ತದೆ........ ಅದೇ ಮತ್ತೆ ಮತ್ತೆ ನಮ್ಮನ್ನು ಹಿಂದಕ್ಕೂ ಕರೆದೊಯ್ಯುತ್ತದೆ.......ಹೇಗೆ ಅಂತೀರಾ? ನಾನು ೭ ನೆಯ ತರಗತಿಯಲ್ಲಿ ಓದಿದ, ಕನ್ನಡ ಕಲ್ಸಿದ ಗುರುವಿಗೆ ಬಯ್ದುಕೊಂಡಾದರೂ ಕಂಠಪಾಠ ಮಾಡಿದ ....... ವನಸುಮದೊಳೆನ್ನ ಜೀವನವು ವಿಕಸಿಸುವಂತೆ ಮನವನನುಗೊಳಿಸು ಗುರುವೇ ಹೇ ದೇವ ........ ಏನಂತೀರಿ

3 comments:

  1. ಬದುಕಿನ ಬಗ್ಗೆ ನಿಮ್ಮ ತುಡಿತ ಇಷ್ಟವಾಯಿತು.. ಬೆಂಗಳೂರಿನ ಉಸಿರು ಕಟ್ಟುವ (ಹೊಗೆ ಅಟ್ಟ) ವಾತಾವರಣದಲ್ಲಿದ್ದರೂ.. ನಾನು ಕಲಿತ ಶಾಲೆಗೆ ಹೋಗಿ ಅದೇ ಕಾಲುಗಳು ಅಲ್ಲಾಡುವ ಬೆಂಚಿನಲ್ಲಿ ಕೂರಬೇಕು ಅನಿಸುವುದಿದೆ.. ಈಗ ಕೂರಲು ಯಾರು ಅವಕಾಶ ಕೊಡುತ್ತಾರೆ.? ಕೊಟ್ಟರೂ ಹೋಗುವುದು ಅಷ್ಟರಲ್ಲೇ ಇದೆ.. ಬದುಕಿನ ಜಾತ್ರೆಯಲ್ಲಿ ಎಲ್ಲೋ ಕಳೆದು ಹೋಗಿದ್ದೇನೆ... :))

    ReplyDelete
  2. ವಿದ್ಯಾ ಅವರೆ..ಸರಳವಾಗಿ ಹೇಳ ಬೇಕೆಂದರೆ ಲೈಫು ಅಷ್ಟೇನೆ...
    ಬಾ ಬಾ ಎಂದು ಕರೆದರೂ ಬರದು ಮತ್ತೆ ಆ ಬಾಲ್ಯ..
    ಬೇಕು ಬೇಕು ಎಂದು ಬಯಸಿದರೂ ಸಿಗದು ಆ ವಿದ್ಯಾರ್ಥಿ ಜೀವನ..
    ನೆನಪುಗಳಲ್ಲೇ ಸುಖ ಪಡೆಯಬೇಕು...

    ReplyDelete